Skip to main content

C-02: Constructive Teaching and Learning with Technology-Part-1 (ರಚನಾತ್ಮಕ ಬೋಧನೆ ಮತ್ತು ತಂತ್ರಜ್ಞಾನದೊಂದಿಗೆ ಕಲಿಕೆ)


TISSx
Enrollment in this course is by invitation only

About This Course(ತರಬೇತಿಯ ಬಗ್ಗೆ)

ಇದು ಅಭ್ಯಾಸ-ಆಧಾರಿತ ಆನ್ಲೈನ್ ತರಬೇತಿ ಆಗಿದ್ದು, ಶಿಕ್ಷಕರು ಬೋಧನೆ (ಪಾಠ) ಮಾಡುವಾಗ ಮತ್ತು ಕಲಿಕೆಯಲ್ಲಿ ತಂತ್ರಜ್ಞಾನದ ಪಾತ್ರದ ಬಗ್ಗೆ ನಿರ್ಣಾಯಕತೆ ಅರಿಯುವುದು ಹಾಗೂ ಆಳವಾದ ತಿಳುವಳಿಕೆಯನ್ನು ಅಭಿವೃದ್ಧಿಪಡಿಸಲು ಸಹಾಯ ಮಾಡುತ್ತದೆ. ಅದೇರೀತಿ ಪಠ್ಯಕ್ರಮ ಮತ್ತು ಶಿಕ್ಷಣಶಾಸ್ತ್ರದಲ್ಲಿ ಸಮಗ್ರವಾಗಿ ತಂತ್ರಜ್ಞಾನವನ್ನು ಉಪಯೋಗಿಸಿಕೊಂಡು ಪಾಠವನ್ನು ವಿನ್ಯಾಸಗೊಳಿಸುವ ಅನುಭವವನ್ನು ನೀಡುತ್ತದೆ. ವಿಷಯಗಳು ಮತ್ತು ಉನ್ನತ ಕ್ರಮದ ಆಲೋಚನೆ ಮಾಡುವಂತಹ ಕೌಶಲ್ಯಗಳನ್ನು ಅಭಿವೃದ್ಧಿಪಡಿಸುವುದು ಇದರಲ್ಲಿ ಒಂದಾಗಿದೆ. ಈ ತರಬೇತಿಯು ತಂತ್ರಜ್ಞಾನಗಳ ನಡುವಿನ ಅಂತರ, ಸಕ್ರಿಯತೆ ಮತ್ತು ಸಹಯೋಗದ ಕಲಿಕೆಗಾಗಿ ವಿವಿಧ ಶಿಕ್ಷಣಶಾಸ್ತ್ರಗಳನ್ನು ಅನ್ವೇಷಿಸುತ್ತದೆ.

Course Objectives (ತರಬೇತಿಯ ಉದ್ದೇಶಗಳು,)

  • ಕಲಿಕೆಗಾಗಿ ಬೇಕಾಗಿರುವ ರಚನಾತ್ಮಕ ವಿಧಾನಗಳನ್ನು ಅರ್ಥಮಾಡಿಕೊಳ್ಳಿ ಮತ್ತು ಮೆಚ್ಚುಗೆಯನ್ನು ವ್ಯಕ್ತಪಡಿಸಿ. ವಿದ್ಯಾರ್ಥಿಗಳಿಗೆ ಅರ್ಥಪೂರ್ಣ ಕಲಿಕೆಯ ಅನುಭವಗಳನ್ನು ಪಡೆಯುವುದಕ್ಕೆ ತಂತ್ರಜ್ಞಾನದ ಪಾತ್ರದ ಬಗ್ಗೆ ತಿಳಿದುಕೊಳ್ಳುವ
  • ವಿವಿಧ ತಂತ್ರಜ್ಞಾನದ ಅಪ್ಲಿಕೇಶನ್ಗಳನ್ನು ಹುಡುಕಿ ಅಥವಾ ಅನ್ವೇಷಿಸಿ.ಅರ್ಥಪೂರ್ಣ ಕಲಿಕೆಯಲ್ಲಿ ಅವುಗಳ ಬಳಕೆ ಹಾಗೂ ಅದರ ಪಾತ್ರವನ್ನು ವಿಮರ್ಶಾತ್ಮಕವಾಗಿ ಮೌಲ್ಯಮಾಪನ ಮಾಡಿ.
  • ವಿದ್ಯಾರ್ಥಿಗಳಿಗೆ ಸಕ್ರಿಯವಾಗಿ ಕಲಿಕೆಯ ವಾತಾವರಣವನ್ನು ಸೃಷ್ಟಿಸಲು ಸಮಗ್ರ ತಂತ್ರಜ್ಞಾನವನ್ನು ಉಪಯೋಗೀಸುವ ಪಾಠಗಳು ಹಾಗೂ ಚಟುವಟಿಕೆಗಳನ್ನು ರಚಿಸಿ.
  • ಸಂಯೋಜಿತ ಆನ್ಲೈನ್ ಬೋಧನೆಗೆ ಪೂರಕವಾಗಿರುವ ಅದೇರೀತಿ ಕಲಿಕೆಗಾಗಿ ದೂರದಲ್ಲಿರುವ ತಂತ್ರಜ್ಞಾನಗಳನ್ನು ಅನ್ವೇಷಿಸಿ.

Who can join the Course? (ಈ ತರಬೇತಿ ಅನ್ನು ಯಾರು ಪಡೆಯಬಹುದು?)

ಮಾಧ್ಯಮಿಕ ಹಂತದ ವಿದ್ಯಾರ್ಥಿಗಳಿಗೆ ಬೋಧನೆ ಮಾಡುವ ಶಿಕ್ಷಕರು ಮತ್ತು ಕನಿಷ್ಠ 5-10 ವಿದ್ಯಾರ್ಥಿಗಳಿಗೆ ಪ್ರವೇಶವನ್ನು ಹೊಂದಿರುವವರು ಈ ತರಬೇತಿಯ ಅನ್ನು ಕೈಗೊಳ್ಳಬಹುದು.

Requirements

ಕಾರ್ಯಕ್ರಮದ ಸಂಪೂರ್ಣ ಅವಧಿಗಾಗಿ ಶಿಕ್ಷಕರು ಲ್ಯಾಪ್ಟಾಪ್ ಅಥವಾ ಸ್ಮಾರ್ಟ್ ಫೋನ್ನಂತಹ ಕಂಪ್ಯೂಟಿಂಗ್ ಸಾಧನಗಳೊಂದಿಗೆ ಉತ್ತಮ ಸಂಪರ್ಕ ಹೊಂದಿರಬೇಕಾಗುತ್ತದೆ.

  • ತರಬೇತಿಯನ್ನು ಪ್ರವೇಶಿಸಲು ಇಂಟರ್ನೆಟ್ ಹೊಂದಿರುವ ಸ್ಮಾರ್ಟ್ ಫೋನ್ ಅವಶ್ಯಕ.
  • ಚಟುವಟಿಕೆಗಳನ್ನು ಪೂರ್ಣಗೊಳಿಸಲು ಮತ್ತು ಪ್ರಯತ್ನಿಸಲು ಇಂಟರ್ನೆಟ್ ಹೊಂದಿರುವ ಕಂಪ್ಯೂಟರ್/ಸ್ಮಾರ್ಟ್ ಫೋನ್ ಅವಶ್ಯಕ.

Course Staff

Course Staff Image #1

Dr. Amina Charania (ಡಾ. ಅಮೀನ ಚರಣಿಯ)

ಅಸೋಸಿಯೇಟ್ ಪ್ರೊಫೆಸರ್/ಸಹಾಯಕ ಪ್ರಾಧ್ಯಾಪಕರು, CETE, TISS

ಅವರು ಟಾಟಾ ಟ್ರಸ್ಟ್ ಅಡಿಯಲ್ಲಿ ಬರುವ ಶಿಕ್ಷಣದಲ್ಲಿ ತಂತ್ರಜ್ಞಾನಕ್ಕಾಗಿ ಸಂಯೋಜಿತ ವಿಧಾನವನ್ನು ಅಭಿವೃದ್ಧಿಪಡಿಸಲು ಮತ್ತು CLIx ಉಪಕ್ರಮದ ಪರಿಕಲ್ಪನೆಯನ್ನು ಅಭಿವೃದ್ಧಿಪಡಿಸುವಲ್ಲಿ ಕೆಲಸ ಮಾಡಿದ್ದಾರೆ. ಅವರ ಸಂಶೋಧನಾ ಆಸಕ್ತಿಗಳು ತಂತ್ರಜ್ಞಾನದ ಏಕೀಕರಣಕ್ಕಾಗಿ (TPACK) ಶಿಕ್ಷಕರ ವೃತ್ತಿಪರ ಅಭಿವೃದ್ಧಿಯ ಕ್ಷೇತ್ರಗಳಲ್ಲಿವೆ, ಮತ್ತು ವಿದ್ಯಾರ್ಥಿಗಳ ಬಳಸುವಿಕೆಯ ಆದಾರದ ಮೇಲೆ ತಂತ್ರಜ್ಞಾನದ ವಿಧಾನಗಳು ತಯಾರಾಗುವವು.

Course Staff Image #2

Ms. Sohini Sen ( ಶ್ರೀಮತಿ ಸೋಹಿನಿ ಸೇನ್ )

ತರಬೇತಿ ಸಂಯೋಜಕರು, ITE ಸಂಪನ್ಮೂಲ ತಂಡ, CETE, TISS

ಅವರು 2013 ರಿಂದ ಶಿಕ್ಷಣದಲ್ಲಿ ತಂತ್ರಜ್ಞಾನದ (ITE) ಸಮಗ್ರ ವಿಧಾನದ ಭಾಗವಾಗಿದ್ದಾರೆ ಮತ್ತು 2016 ರಿಂದ TISS ITE ಸಂಪನ್ಮೂಲ ತಂಡದೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದಾರೆ. ಅವರು ICT ಮತ್ತು ಶಾಲಾ ಶಿಕ್ಷಕರಿಗೆ ಶಿಕ್ಷಣದಲ್ಲಿ ಪ್ರಮಾಣಪತ್ರವನ್ನು ನೀಡುವ ನಿರ್ವಹಣೆಯನ್ನು ನಿರ್ವಹಿಸುತ್ತಿದ್ದಾರೆ. ಅದೇರೀತಿ ಮೇಲ್ವಿಚಾರಣೆ ಹಾಗೂ ಸಾಮರ್ಥ್ಯ ವೃದ್ಧಿಗೆ ಬೆಂಬಲವನ್ನು ಒದಗಿಸುತ್ತಿದ್ದಾರೆ. ಸಂಪನ್ಮೂಲ ತಂಡದ ಸದಸ್ಯರಾಗಿ ಸರ್ಕಾರಿ ಶಾಲೆಗಳಲ್ಲಿ ITE ನೆಲದ ಅನುಷ್ಠಾನಕ್ಕಾಗಿ ಶ್ರಮಿಸುತ್ತಿದ್ದಾರೆ

Frequently Asked Questions

What web browser should I use? (ನಾನು ಯಾವ ವೆಬ್ ಬ್ರೌಸರ್ ಅನ್ನು ಬಳಸಬೇಕು?)

Open edX ಪ್ಲಾಟ್ಫಾರ್ಮ್/ವೇದಿಕೆ Chrome, Firefox ಅಥವಾ Safar ಪ್ರಸ್ತುತ ಆವೃತ್ತಿಗಳೊಂದಿಗೆ ಅಥವಾ ಇಂಟರ್ನೆಟ್ ಎಕ್ಸ್ಪ್ಲೋರರ್ ಆವೃತ್ತಿ 9 ಮತ್ತು ಹೆಚ್ಚಿನದರೊಂದಿಗೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ.

ಇಲ್ಲಿ ನೋಡಿ ಬೆಂಬಲಿತ ಬ್ರೌಸರ್ಗಳ ಪಟ್ಟಿ ಈಗಿರುವ ಹೆಚ್ಚಿನ ಮಾಹಿತಿಗಾಗಿ.